
15th October 2025
ಬೈಲಹೊಂಗಲ-ಇದೇ ಅಕ್ಟೊಬರ್ 26 ರಂದು ಮೌನೇಶ್ವರ ನಗರದಲ್ಲಿ ಸದಾಶಿವಯ್ಯ ಪತ್ರಿಮಠ ಶಾಸ್ತ್ರಿಯವರಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಚಂಡಿಕೇಶ್ವರಿ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಗುವುದು ಎಂದು ವೇ. ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರೀಗಳು ತಿಳಿಸಿದರು.
ಪಟ್ಟಣದ ಶ್ರೀ ದೊಡ್ಡಾದೇವರ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಪಟ್ಟಣದ ಮೌನೇಶ್ವರ ನಗರದಲ್ಲಿರುವ ಮೌನೇಶ್ವರ ಕಲ್ಯಾಣ ಮಂಟಪದ ಎದುರಿಗೆ ನೂತನ ಚಂಡಿಕೇಶ್ವರಿ ದೇವಸ್ಥಾನ ಲೋಕಾರ್ಪಣೆ ಹಾಗೂ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಜರುಗಲಿದೆ.
ಅ. 26 ರಂದು
ಮುಂಜಾನೆ 8 ಗಂಟೆಗೆ ಶ್ರೀ ದೊಡ್ಡಾದೇವರ ದೇವಸ್ಥಾನದಿಂದ ಕುಂಭಮೇಳ ಸಕಲ ವಾದ್ಯಮೇಳದೊಂದಿಗೆ ಸಾಗಿ ದೇವಸ್ಥಾನ ತಲುಪುವುದು.
ಮುರಗೋಡ ದುರದುಂಡೀಶ್ವರ ಮಠದ ಪೂಜ್ಯ ನೀಲಕಂಠ ಸ್ವಾಮೀಜಿಗಳವರ ದಿವ್ಯ ಸಾನಿಧ್ಯ ಹಾಗೂ ಹರಗುರು ಚರ ಮೂರ್ತಿಗಳ ನೇತೃತ್ವದಲ್ಲಿ ವಿವಿಧ ಹೋಮಹವನ ನೆರವೇರಿಸುವುದರೊಂದಿಗೆ ಶ್ರೀ ಚಂಡಿಕೇಶ್ವರಿ ಅಮ್ಮನವರ ಮೂರ್ತಿ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವುದು.
ಮದ್ಯಾಹ್ನ 12 ಗಂಟೆಗೆ ಮಹಾ ಪ್ರಸಾದ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಬೋಳನ್ನವರ,ಪಾಂಡಪ್ಪ ಇಂಚಲ,ಉಳವಪ್ಪ ಶಟಗಾರ,ಕಾಶಯ್ಯ ಹಿರೇಮಠ, ಈರಪ್ಪ ಬೆಳಗಾವಿ, ನಾಗಪ್ಪ ಲಿಂಬೆನ್ನವರ, ಉಳವಪ್ಪ ಬಡ್ಡಿಮನಿ, ಕುಮಾರಗೌಡ ಪಾಟೀಲ,ಶ್ರೀಕಾಂತ ಮತ್ತಿಕೊಪ್ಪ,ಗಂಗಪ್ಪ ಚಪಳಿ,ರಮೇಶ ನಾಶಿಪುಡಿ,ಸೋಮಪ್ಪ ವಾಲಿ,ಕಿರಣ ಶಿರವಂತಿ ಸೇರಿದಂತೆ ಮತ್ತಿತರರು ಇದ್ದರು.
ಬಡ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ : ಎಸ್. ದೇವಾನಂದ
ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ